ಶ್ರೀ. ಟಿ. ಪಿ. ಕೈಲಾಸಂ ನಾಟಕೋತ್ಸವ, ಮುಂಬೈನ " ಮೈಸೂರ್ ಅಸೋಸಿಯೇಷನ್" ನಲ್ಲಿ !

ಟಿ. ಪಿ. ಕೈಲಾಸಂ ನಾಟಕ ಕಾರ್ಯಕ್ರಮವನ್ನು ಮೈಸೂರ್ ಅಸೋಸಿಯೇಶನ್ ನ, ಸಭಾಂಗಣದಲ್ಲಿ ಪ್ರದರ್ಶಿಸಿದಾಗ ನಾನು ಕೆಲವಾರು ಮುಖ್ಯ ಸನ್ನಿವೇಷಗಳನ್ನು ನನ್ನ ಕ್ಯಾಮರದಲ್ಲಿ ಸೆರೆಹಿಡಿದು, ಒಂದು 'ಬ್ಲಾಗ್ 'ಮಾಡಿದ್ದೇನೆ. ಇದು ಆ ದಿನದ ಕಾರ್ಯಕ್ರಮಗಳನ್ನು ನೆನಪಿಗೆ ತರುವ ದಿಕ್ಕಿನಲ್ಲಿ ಕೆಲಸಮಾಡುತ್ತದೆ, ಎಂದು ನಂಬಿದ್ದೇನೆ.

 (ಚಿತ್ರಗಳನ್ನು 'ಮೈಸೂರ್ ಅಸೋಶಿಯೇಷನ್ ನವರ ಸೌಜನ್ಯ 'ದಿಂದ ಪ್ರಕಟಿಸುತ್ತಿದ್ದೇನೆ). -ವೆಂಕಟೇಶ್, ಹಿರಿಯ ಅಜೀವ ಸದಸ್ಯ.

 ’ಮೈಸೂರ್ ಅಸೋಸಿಯೇಷನ್’ ಮುಂಬೈ ನಲ್ಲಿ ಆಯೋಜಿಸಲ್ಪಟ್ಟ ’ಟಿ. ಪಿ. ಕೈಲಾಸಮ್ ನಾಟಕೋತ್ಸ’ವದ ಸಮಯದಲ್ಲಿ ಹಮ್ಮಿಕೊಂಡ ಹಲವು ಕಾರ್ಯಕ್ರಮಗಳು ಹೀಗಿವೆ : * ಕೈಲಾಸಮ್ ರವರು ಬರೆದ ಇಂಗ್ಲೀಷ್ ಮತ್ತು ಕನ್ನಡನಾಟಕಗಳ ಪುಸ್ತಕ ಪ್ರದರ್ಶನ. * ಕೈಲಾಸಮ್ ರವರ ನಾಟಕ ಮತ್ತು ಹಾಡುಗಳನ್ನು ವೇದಿಕೆಯಮೇಲೆ ಪ್ರದರ್ಶನ ಮಾಡಿದ್ದು. ಕೈಲಾಸಮ್ ಬಗ್ಗೆ ಕಾಳಜಿವಹಿಸಿ ತಮ್ಮನ್ನು ಅವರ ನಾಟಕಗಳಲ್ಲಿ ತೊಡಗಿಸಿಕೊಂಡ ಆಸಕ್ತರಿಗೆ ಗೌರವ ಸಲ್ಲಿಸುವಿಕೆ. * ವಂದನಾರ್ಪಣೆ. 

ಕೈಲಾಸಂರವರ ನಗೆ-ನಾಟಕ, ’ಹುತ್ತದಲ್ಲಿ ಹುತ್ತ,’ ದ ತಂಡದವರೊಂದಿಗೆ ಕುಳಿತು ತೆಗೆಸಿದ ಸಾಮೂಹಿಕ ಚಿತ್ರ :ರಂಗಮಂಚದಮೇಲೆ ಕುಳಿತ/ನಿಂತ ಪ್ರಮುಖರಲ್ಲಿ, ’ಮೈಸೂರ್ ಅಸೋಸಿಯೇಷನ್ ಅಧ್ಯಕ್ಷ’ರಾಗಿರುವ, ಶ್ರೀ. ರಾಮಭದ್ರಾರವರು, ಶ್ರೀ. ಬಿ. ಎಸ್. ಕೇಶವರಾವ್, ಡಾ. ಬಿ. ವಿ. ರಾಜಾರಾಮ್, ಶ್ರೀ. ವೈ. ವಿ. ಗುಂಡುರಾವ್, ಮತ್ತು 'ಮೈಸೂರ್ ಅಸೋಸಿಯೇಷನ್ ನ ಕಾರ್ಯನಿರ್ವಾಹಕ,' ಶ್ರೀ. ಕೆ. ಮಂಜುನಾಥಯ್ಯ, ಮತ್ತು, ’ಕಾರ್ಯಕ್ರಮ ಸಂಚಾಲಕಿ’, ಶ್ರೀಮತಿ. ಲಕ್ಷ್ಮೀ ಸೀತಾರಾಂ.

ಶ್ರೀ. ನಾರಾಯಣ ನವಿಲೇಕರ್,  ವಂದನಾರ್ಪಣೆಯನ್ನು  ಮಾಡುತ್ತಿರುವುದು...
ಕರ್ನಾಟಕ ಸಂಘದ ಪ್ರತಿನಿಧಿಗಳಾಗಿ, ಶ್ರೀ. ಜೋಕಟ್ಟೆ, ಮತ್ತು, ಶ್ರೀ. ಭರತ್ ಕುಮಾರ್ ಪೊಲಿಪು..
ವೇದಿಕೆಯ ಮೇಲೆ ಗಣ್ಯರು...
’ ನೇಸರು ಪತ್ರಿಕೆಯ ಸಂಪಾದಕಿ,  ಡಾ. ಗಿರಿಜಾಶಾಸ್ತ್ರಿಯವರಿಗೆ, ಡಾ. ರಾಜಾರಾಮ್, ಪುಷ್ಪಗುಚ್ಛವನ್ನಿತ್ತು ಗೌರವಿಸುತ್ತಿದ್ದಾರೆ
’ಮೈಸೂರ್ ಅಸೋಸಿಯೇಷನ್’ ನ ಅಧ್ಯಕ್ಷ,  ಶ್ರೀ. ರಾಮಭದ್ರರು,  ಡಾ. ರಾಜಾರಾಮ್ ರವರಿಗೆ ಪುಷ್ಪ-ಗುಚ್ಛವನ್ನಿತ್ತು ಗೌರವಿಸುತ್ತಿದ್ದಾರೆ.
’ಮೈಸೂರ್ ಅಸೋಸಿಯೇಷನ್’ ನ ಪತ್ರಿಕೆ, ’ನೇಸರುವಿನ ಕೈಲಾಸಮ್ ಬಗ್ಗೆ ಒಂದು ವಿಶೇಷ ಸಂಚಿಕೆ,’ ಯನ್ನು ಬಿಡುಗಡೆಮಾಡಿದನಂತರ, ಪ್ರತಿಗಳನ್ನು ಸಭಿಕರಿಗೆ ತೋರಿಸುತ್ತಿರುವ ದೃಷ್ಯ !
’ಮೈಸೂರ್ ಅಸೋಸಿಯೇಷನ್’ ನ ಅಧ್ಯಕ್ಷ, ಶ್ರೀ ರಾಮಭದ್ರರು, ಶ್ರೀ. ವೈ .ಎನ್. ಗುಂಡೂರಾಯರನ್ನು ಪುಷ್ಪ-ಗುಚ್ಛದೊಂದಿಗೆ ಗೌರವಿಸುತ್ತಿರುವುದು.
ಶ್ರೀ. ವೈ.  ಎನ್. ಗುಂಡೂರಾಯರನ್ನು ಸಭಿಕರನ್ನುದ್ದೇಶಿಸಿ ಮಾತಾಡುತ್ತಿರುವುದು...
’ಮೈಸೂರು ಅಸೋಸಿಯೇಷನ್ ನ ಹಿರಿಯ ಸದಸ್ಯ ಹಾಗೂ ಮುಖ್ಯ ಕಾರ್ಯಕರ್ತರೂ’ ಆದ ಶ್ರೀ. ಕೆ. ಮಂಜುನಾಥಯ್ಯನವರಿಗೆ, ಡಾ. ರಾಜಾರಾಮ್ ಹೂ-ಗುಚ್ಛದೊಂದಿಗೆ ಸನ್ಮಾನಿಸುತ್ತಿರುವುದು.
’ಮೈಸೂರು ಅಸೋಸಿಯೇಷನ್ ನ ಹಿರಿಯ ಸದಸ್ಯರೂ,  ಹಾಗೂ ಬಹು-ಮುಖ್ಯ ಕಾರ್ಯಕರ್ತರೂ’ ಆದ ಶ್ರೀ. ಕೆ. ಮಂಜುನಾಥಯ್ಯನವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡುತ್ತಿರುವುದು
’ ಡಾ. ರಾಜಾರಾಮ್ ರವರು, ಸಭಿಕರನುದ್ದೇಶಿಸಿ ಭಾಷಣ ಮಾಡುತ್ತಿರುವುದು
’ ಡಾ. ರಾಜಾರಾಮ್ ..
"ಟಿ.ಪಿ. ಕೈಲಾಸಂ" (೧೮೮೫-೧೯೪೬)

"ಟಿ.ಪಿ. ಕೈಲಾಸಂ" (೧೮೮೫-೧೯೪೬) ಶ್ರೀ ತ್ಯಾಗರಾಜ ಪರಮಶಿವ ಕೈಲಾಸಂ ಜನಿಸಿದ್ದು ೧೮೮೪ರ ಜುಲೈ ೨೯ರಂದು ಮೈಸೂರಿನಲ್ಲಿ. ತಂದೆ ಮೈಸೂರು ಸಂಸ್ಥಾನದ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಪರಮಶಿವ ಅಯ್ಯರ್. ಮೈಸೂರು, ಬೆಂಗಳೂರು, ಹಾಸನದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಮದ್ರಾಸಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಭೂಗರ್ಭ ಶಾಸ್ತ್ರದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್‍ನ ರಾಯಲ್ ಕಾಲೇಜಿಗೆ ಸೇರಿದರು. ಇಂಗ್ಲೆಂಡ್‍ನಲ್ಲಿ ಕೆಲವು ವರ್ಷಗಳ ಕಾಲ ಇದ್ದ ಅವರು ಅಲ್ಲಿನ ಸಂಗೀತ, ಸಾಹಿತ್ಯ, ನಾಟಕಗಳನ್ನು ಆಳವಾಗಿ ಅಭ್ಯಾಸ ಮಾಡಿದರು. ಇಂಗ್ಲಿಷ್ ರಂಗಭೂಮಿ ಅವರನ್ನು ಬಹುವಾಗಿ ಆಕರ್ಷಿಸಿತ್ತು. ನಾಟಕಗಳ ಬಗ್ಗೆ ವಿಶೇಷ ಒಲವನ್ನು ಅವರು ಬೆಳೆಸಿಕೊಂಡರು.

 ನಾಟಕವೆಂದರೆ ಪೌರಾಣಿಕ ನಾಟಕಗಳು, ಭಾರೀಯಾದ ಮೇಕಪ್ಪು, ದಿರಿಸು, ರಂಗಸಜ್ಜಿಕೆ ಎಂಬೆಲ್ಲ ಅಂಶಗಳಿಂದ ತುಂಬಿಹೋಗಿದ್ದ ನಾಟಕದ ಕಲ್ಪನೆಗೆ ಹೊಸ ರೂಪವನ್ನು ಕೈಲಾಸಂ ನೀಡಿದರು. ಹಾಸ್ಯ, ವ್ಯಂಗ್ಯ, ಕುಚೋದ್ಯಗಳಿಂದ ಕೂಡಿದ, ವಿನೋದಪೂರ್ಣ, ವಿಚಿತ್ರ ಚಕಮಕಿ ಸಂಭಾಷಣೆಯ ಪಾತ್ರಗಳು, ಸನ್ನಿವೇಶಗಳು ಕೈಲಾಸಂರಿಗೆ ಕೀರ್ತಿ ತಂದಿತ್ತವಲ್ಲದೆ ಕನ್ನಡ ರಂಗಭೂಮಿಗೆ ಹೊಸ ರೂಪವೊಂದನ್ನು ನೀಡಿದವು. ೧೯೧೫ರಲ್ಲಿ ಸಬ್ ಅಸಿಸ್ಟೆಂಟ್ ಜಿಯಾಲಜಿಸ್ಟ್ ವೃತ್ತಿಗೆ ಸೇರಿದ ಅವರು, ಕೆ.ಜಿ.ಎಫ್., ಬೆಂಗಳೂರು, ಶಿವಮೊಗ್ಗಗಳಲ್ಲಿ ಕೆಲಸ ಮಾಡಿದರೂ, ಕೆಲವು ವರ್ಷಗಳಲ್ಲೇ ರಾಜೀನಾಮೆ ನೀಡಿದರು.

ವರದಾಚಾರ್ಯರ ಕಂಪನಿಯ ನಾಟಕಗಳಲ್ಲಿ ಅವರು ಪಾತ್ರ ವಹಿಸುತ್ತಿದ್ದರು. ಕೈಲಾಸಂ ಅವರು ರಚಿಸಿದ ನಾಟಕಗಳು ಅದೆಷ್ಟೋ. ಇಂಗ್ಲೀಷ್‍ನಲ್ಲಿ ಪ್ರಕಾಂಡ ಪಾಂಡಿತ್ಯ ಹೊಂದಿದ್ದ ಅವರಿಗೆ ಶೇಕ್ಸ್ ಫಿಯರ್, ಬರ್ನಾರ್ಡ್ ಶಾ, ವೈಲ್ಡ್, ಇಬ್ಸನ್ ನಾಟಕಗಳನ್ನು ರಾತ್ರಿಯಿಡೀ ಅಭಿನಯಿಸಿ ತೋರಿಸುವ ಗೀಳಿತ್ತು. ಕೈಲಾಸಂರವರ ಕೆಲವು ನಾಟಕಗಳೆಂದರೆ,

*  ಟೊಳ್ಳುಗಟ್ಟಿ (೧೯೨೨)

* ಪೋಲಿಕಿಟ್ಟಿ,

*  ಬಹಿಷ್ಕಾರ,

 * ಹೋಂ ರೂಲು,

* ಗಂಡಸ್ಕತ್ರಿ,

* ವೈದ್ಯನ ವ್ಯಾಧಿ,

* ತಾವರೆಕೆರೆ,

*  ಹುತ್ತದಲ್ಲಿ ಹುತ್ತ,

*  ಬಂಡ್ವಾಳಿಲ್ಲದ ಬಡಾಯಿ,

*  ಅನುಕೂಲಕ್ಕೊಬ್ಬಣ್ಣ,

*  ಅಮ್ಮಾವ್ರ ಗಂಡ,

* ಸತ್ತವನ ಸಂತಾಪ,

* ನಂಕಂಪ್ನಿ,  ಇತ್ಯಾದಿಗಳು.

*  ಕೈಲಾಸಂರ ಜನಪ್ರಿಯ ಹಾಡುಗಳೆಂದರೆ:

*  ತಿಪ್ಪಾರ್‍ಹಳ್ಳಿ,

*  ಕೋಳಿಕೆ ರಂಗಾ,

 *ನಂಜೀನನ್ ಅಪರಂಜೀ,

* ಕಾಶಿಗೆ ಹೋದ ನಂಭಾವ,

*  ಬೋರನ ಭಾರ,

*  ಅರಿವು,  ಇತ್ಯಾದಿಗಳು..

 ೧೯೪೫ರಲ್ಲಿ ಮದ್ರಾಸಿನಲ್ಲಿ ನಡೆದ '೨೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ' ಯನ್ನು ಅವರು ವಹಿಸಿದ್ದರು.

 ಅವರು ನಿಧನ ಹೊಂದಿದ್ದು ೧೯೪೬ರ ನವಂಬರ್ ೨೩ರಂದು.

http://sampada.net/article/5835

’ಯುಗಪುರುಷ, ಮಹಾತ್ಮಾ ಗಾಂಧಿ’ ಯವರ ಬಗ್ಗೆ ಬರೆದ ದಿವ್ಯ ಕವಿತೆ, ಇದನ್ನು ಇಂಗ್ಲೀಷ್ ನಲ್ಲಿ ರಚಿಸಿದವರು, ಶ್ರೀ. ಟಿ. ಪಿ. ಕೈಲಾಸಂ, ಮತ್ತು ಅದನ್ನು ಕನ್ನಡಕ್ಕೆ ಅನುವಾದಮಾಡಿದವರು, ಪ್ರೊ. ಜಿ. ಪಿ. ರಾಜರತ್ನಂರವರು.






















..
.
ನಾಟಕದ ಹಳೆಯ ತಂಡ...
.
ಮೈಸೂರ್ ಅಸೋಸಿಯೇಷನ್ ನ ಗ್ರಂಥಭಂಡಾರದಿಂದ, 'ಕೈಲಾಸಂ ನಾಟಕಪುಸ್ತಕಗಳ ಪ್ರದರ್ಶನ ' ವಿತ್ತು....
 ನಾಟಕದಲ್ಲಿರುವ ಮೈಸೂರ್ ಅಸೋಸಿಯೆಷನ್ ನ ಕಲಾವಿದರು, ಶ್ರೀ. ಸ್ವಾಮಿ, ಮತ್ತು, ಡಾ. ಬಿ. ಆರ್. ಮಂಜುನಾಥ್.....

Comments

Popular posts from this blog

ಕೈಲಾಸಂ ರವರ ತೀರಹತ್ತಿರದ ಗೆಳೆಯರ ಬಗ್ಗೆ ಒಂದೆರಡು ಮಾತುಗಳು !

”ಟಿ. ಪಿ. ಕೈಲಾಸಂ ನಾಟಕೋತ್ಸವ ’- ’ಕೈಲಾಸಂ ನಾಟಕಗಳ ಸರಮಾಲೆ’-ಒಂದು ಸುಂದರ ಪ್ರಯೋಗ ! !