Posts

Showing posts from 2009

ಶ್ರೀ. ಟಿ. ಪಿ. ಕೈಲಾಸಂ ನಾಟಕೋತ್ಸವ, ಮುಂಬೈನ " ಮೈಸೂರ್ ಅಸೋಸಿಯೇಷನ್" ನಲ್ಲಿ !

Image
ಟಿ. ಪಿ. ಕೈಲಾಸಂ ನಾಟಕ ಕಾರ್ಯಕ್ರಮವನ್ನು ಮೈಸೂರ್ ಅಸೋಸಿಯೇಶನ್ ನ, ಸಭಾಂಗಣದಲ್ಲಿ ಪ್ರದರ್ಶಿಸಿದಾಗ ನಾನು ಕೆಲವಾರು ಮುಖ್ಯ ಸನ್ನಿವೇಷಗಳನ್ನು ನನ್ನ ಕ್ಯಾಮರದಲ್ಲಿ ಸೆರೆಹಿಡಿದು, ಒಂದು 'ಬ್ಲಾಗ್ 'ಮಾಡಿದ್ದೇನೆ. ಇದು ಆ ದಿನದ ಕಾರ್ಯಕ್ರಮಗಳನ್ನು ನೆನಪಿಗೆ ತರುವ ದಿಕ್ಕಿನಲ್ಲಿ ಕೆಲಸಮಾಡುತ್ತದೆ, ಎಂದು ನಂಬಿದ್ದೇನೆ.  (ಚಿತ್ರಗಳನ್ನು 'ಮೈಸೂರ್ ಅಸೋಶಿಯೇಷನ್ ನವರ ಸೌಜನ್ಯ 'ದಿಂದ ಪ್ರಕಟಿಸುತ್ತಿದ್ದೇನೆ). -ವೆಂಕಟೇಶ್, ಹಿರಿಯ ಅಜೀವ ಸದಸ್ಯ.  ’ಮೈಸೂರ್ ಅಸೋಸಿಯೇಷನ್’ ಮುಂಬೈ ನಲ್ಲಿ ಆಯೋಜಿಸಲ್ಪಟ್ಟ ’ಟಿ. ಪಿ. ಕೈಲಾಸಮ್ ನಾಟಕೋತ್ಸ’ವದ ಸಮಯದಲ್ಲಿ ಹಮ್ಮಿಕೊಂಡ ಹಲವು ಕಾರ್ಯಕ್ರಮಗಳು ಹೀಗಿವೆ :  * ಕೈಲಾಸಮ್ ರವರು ಬರೆದ ಇಂಗ್ಲೀಷ್ ಮತ್ತು ಕನ್ನಡನಾಟಕಗಳ ಪುಸ್ತಕ ಪ್ರದರ್ಶನ.  * ಕೈಲಾಸಮ್ ರವರ ನಾಟಕ ಮತ್ತು ಹಾಡುಗಳನ್ನು ವೇದಿಕೆಯಮೇಲೆ ಪ್ರದರ್ಶನ ಮಾಡಿದ್ದು. ಕೈಲಾಸಮ್ ಬಗ್ಗೆ ಕಾಳಜಿವಹಿಸಿ ತಮ್ಮನ್ನು ಅವರ ನಾಟಕಗಳಲ್ಲಿ ತೊಡಗಿಸಿಕೊಂಡ ಆಸಕ್ತರಿಗೆ ಗೌರವ ಸಲ್ಲಿಸುವಿಕೆ.  * ವಂದನಾರ್ಪಣೆ.  ಕೈಲಾಸಂರವರ ನಗೆ-ನಾಟಕ, ’ಹುತ್ತದಲ್ಲಿ ಹುತ್ತ,’ ದ ತಂಡದವರೊಂದಿಗೆ ಕುಳಿತು ತೆಗೆಸಿದ ಸಾಮೂಹಿಕ ಚಿತ್ರ : ರಂಗಮಂಚದಮೇಲೆ ಕುಳಿತ/ನಿಂತ ಪ್ರಮುಖರಲ್ಲಿ, ’ಮೈಸೂರ್ ಅಸೋಸಿಯೇಷನ್ ಅಧ್ಯಕ್ಷ’ರಾಗಿರುವ, ಶ್ರೀ. ರಾಮಭದ್ರಾರವರು, ಶ್ರೀ. ಬಿ. ಎಸ್. ಕೇಶವರಾವ್, ಡಾ. ಬಿ. ವಿ. ರಾಜಾರಾಮ್, ಶ್ರೀ. ವೈ. ವಿ. ಗುಂಡು