ಕೈಲಾಸಂ ರವರ ತೀರಹತ್ತಿರದ ಗೆಳೆಯರ ಬಗ್ಗೆ ಒಂದೆರಡು ಮಾತುಗಳು !

ಕೈಲಾಸಂ ಅತ್ಯಂತ ಜನಪ್ರಿಯವ್ಯಕ್ತಿಯಾಗಿದ್ದವರು. ಅವರ ಮಾತುಗಳೇ ಅವರ ಬಂಡವಾಳವಾಗಿದ್ದದ್ದು ಒಂದಾದರೆ, ಯಾರನ್ನೂಎದುರುಹಾಕಿಕೊಳ್ಳುವ ಸ್ವಭಾವ ಅವರದಾಗಿರಲಿಲ್ಲ. ಈ ವಿಷಯದಲ್ಲಿ ಅವರು ಅವರ ತಂದೆಯವರಿಗೆ ತದ್ವಿರುದ್ಧವಾಗಿದ್ದರು !

ಆಗಿನಕಾಲದಲ್ಲಿ ಇಂಗ್ಲೆಂಡ್ ಗೆ ಹೋಗಿ ಪದವಿ ಪಡೆದ ಅತ್ಯಂತ ಮೇಧಾವಿಯಾದ ಕನ್ನಡದ  ವ್ಯಕ್ತಿಯೊಬ್ಬ, ಇಷ್ಟು ಸರಳವಾಗಿ ಎಲ್ಲರೊಡನೆ ಬೆರೆಯುವರಲ್ಲ, ಎಂಬ ಒಂದು ವಿಷಯಕ್ಕೇ ಅವರು ಮೊದಲು ಜನರಿಗೆ ಬೇಕಾದವರಾಗುತ್ತಿದ್ದರು. ನಂತರ ಅಂಥವರಿಗೆ ಮನೆಯಲ್ಲಿ ಪುರಸ್ಕಾರ ದೊರೆಯದಿದ್ದಾಗ, ಅವರ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಜನರು ಹೆಚ್ಚಾದರು. ಕೊನೆಯದಾಗಿ ಮಾತು ಮಾತಿಗೂ ನಗೆ ಚಟಾಕಿಗಳನ್ನು ಗಾಳಿಗೆ ತೂರುಬಿಡುತ್ತಿದ್ದ ಅವರ ದಿಢೀರ್ ಹಾಸ್ಯದ ಬಗೆ, ಎಂತಹವರನ್ನೂ ಸೂಜಿಗಲ್ಲಿನಂತೆ ಆಕರ್ಶಿಸಿತ್ತು !

ಸುಮಾರು ೨೦  ವರ್ಷ ಚಿಕ್ಕವರಾಗಿದ್ದ  ಡಾ. ಶಿವರಾಂ, ಕೈಲಾಸಂರವರ ಮನೆಯ ಸದಸ್ಯರಂತೆ ಇದ್ದರು. ತಂದೆ ಜಸ್ಟಿಸ್ ಪರಮಶಿವ ಅಯ್ಯರ್ ಗೆ ತೀರ ಬೇಕಾಗಿದ್ದ, ವಲಯದಲ್ಲಿದ್ದರು.

’ರಾಮಸ್ವಾಮಯ್ಯ ಶಿವರಾಮ್ ”

(೧೦, ನವೆಂಬರ್, ೧೯೦೫-೧೩, ಜನವರಿ, ೧೯೮೪)

ಚಿಕ್ಕವರಾಗಿದ್ದಾಗ ರಾಶಿಯವರು ಬಡತನದ ಬೇಗೆಯಯನ್ನು ಅನುಭವಿಸಿದವರು. ದೊಡ್ಡ ಸಂಸಾರದ ಜವಾಬ್ದಾರಿಯನ್ನು ಹೊತ್ತು ನಿಭಾಯಿಸಿದವರು, ವೈದ್ಯಕೀಯ ಶಿಕ್ಷಣವನ್ನು ಅಂತಹ ಪರಿಸರದಲ್ಲಿ ಹೇಗೆ ಮಾಡಿದರೋ ಅವರಿಗೇ ಒಮ್ಮೆ ವಿಸ್ಮಯವಾಗುತ್ತಿತ್ತು.

ರಾಶಿ’ಯವರ  ಜನನ, ಮತ್ತು ಬಾಲ್ಯದ ದಿನಗಳು :

ಶ್ರೀ. ’ರಾಮಸ್ವಾಮಯ್ಯ’, ಮತ್ತು ’ಶ್ರೀಮತಿ ಸೀತಮ್ಮ’ನವರ ಹಿರಿಯಮಗನಾಗಿ ೧೦, ನವೆಂಬರ್, ೧೯೦೫ ರಲ್ಲಿ ಜನಿಸಿದರು. ಇವರೇ  ಇವರ ಜನನದ ನಂತರ, ೫ ಗಂಡು, ಎರಡು ಹೆಣ್ಣು. ಮಲ್ಲೇಶ್ವರದ ೧೧ ನೇ ಕ್ರಾಸ್ ನಲ್ಲಿ ’ಗೋಪಾಲ ಕೃಷ್ಣಸ್ವಾಮಿ ದೇವಾಲಯ’ದ ಬಳಿ ಮನೆ. ತಾತ,  ’ಶ್ರೀ ಅನಂತರಾಮಯ್ಯ’ನವರು ಕಟ್ಟಿಸಿದ್ದು. ಪ್ರಾಥಮಮಿಕ ಮಾಧ್ಯಮಿಕ ಶಾಲಾಭ್ಯಾಸ ಮನೆಗೆ ಸಮೀಪದ ಶಾಲೆಗಳಲ್ಲೇ ನಡೆಯಿತು. ಪ್ರೌಢಶಾಲಾಭ್ಯಾಸ ಮಾತ್ರ ’ಕೋಟೆ ಹೈಸ್ಕೂಲ್’ ನಲ್ಲಿ. ಓದಿನಲ್ಲಿ ಅವರಿಗೆ ತೀವ್ರಆಸಕ್ತಿ. ಪಠ್ಯಪುಸ್ತಕವಲ್ಲದೆ,  ಚರಿತ್ರೆ, ಕವನ, ಕಾದಂಬರಿ, ಜ್ಯೋತಿಷ್ಯಶಾಸ್ತ್ರದ ಪುಸ್ತಕಗಳನ್ನೂ ಓದಿಮುಗಿಸಿದ್ದರು.  ’ಬೆಂಗಳೂರಿನ ಸೆಂಟ್ರೆಲ್ ಕಾಲೇಜ್’ ನಲ್ಲಿ ’ಬಿ. ಎ. ಪದವಿ’ಪಡೆದರು. ’ಬಿ. ಎಮ್. ಶ್ರೀ’ಯವರ ಪ್ರೇರಣೆಯಂತೆ ಅವರು ಮೆಡಿಕಲ್ ಗೆ ಸೇರಿದರು. ೧೯೩೦ ರಲ್ಲಿ ಪದವಿ ಪಡೆದರು.

ವೈದ್ಯಕೀಯ ವೃತ್ತಿ :

’ಮೆಜೆಸ್ಟಿಕ್ ಸರ್ಕಲ್’ ಹತ್ತಿರ, ’ಬಳೆಪೇಟೆ’ಗೆ ಹೋಗುವ ದಾರಿಯಲ್ಲಿ, ಎಡಗಡೆ ಒಂದು ’ಔಷಧಾಲಯ’ವನ್ನು ಆರಂಭಿಸಿದರು. ’ಡಾ. ಎಸ್ ಸುಬ್ಬರಾವ್’ ರವರ ಸಹಭಾಗಿತ್ವದ ನೆರವಿನಿಂದ ಶುರುವಾದ,  ’ಸಿಟಿ ಡಿಸ್ಪೆನ್ಸರಿ ಅಂಡ್ ಲ್ಯಾಬೊರೇಟೊರಿ’ ಕೆಲವೇ ದಿನಗಳಲ್ಲಿ ಹೆಸರುಮಾಡಿತು. ಮುಂದೆ, ೧೯೪೦-೪೬ ರ ವರೆಗೆ, ’ಬೆಂಗಳೂರಿನ ಸೇಂಟ್ ಮಾರ್ಥಾಸ್  ಆಸ್ಪತ್ರೆ’ಯಲ್ಲಿ  ಕಿವಿ, ಗಂಟಲು, ಮೂಗಿನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ವೈದ್ಯ ಎಸ್. ಕೃಷ್ಣಮೂರ್ತಿಗಳು ಇಂದಿಗೂ ರಾಶಿಯವರ ಕ್ಲಿನಿಕ್ ನ್ನು ನಡೆಸಿಕೊಂಡು ಹೋಗುತ್ತಿದ್ದಾರ‍ೆ.(ಮೆಜೆಸ್ಟಿಕ್ ಸಿನೆಮಾ ಮಂದಿರದ ಎಡಭಾಗದಲ್ಲಿ) ಅದಕ್ಕೆ ಹೊಂದಿಕೊಂಡಂತೆ ಇದೆ.

ಶಿವರಾಂ ಹೆಸರಿನಲ್ಲಿನ ಮೊದಲ ಅಕ್ಷರ, ’ಶಿ’ ಮತ್ತು ರಾಮಾಸ್ವಾಮಯ್ಯ ಹೆಸರಿನಿಂದ ’ರಾ’ ಮೊದಲಕ್ಷರಗಳನ್ನು ಆರಿಸಿಕೊಂಡು ಅವನ್ನು ತಿರುಗ-ಮುರುಗ ಮಾಡಿ ಬರೆದು ’ರಾಶಿ’ ಎಂದು ತಮ್ಮ ಕಾವ್ಯ-ನಾಮವನ್ನು ಅವರೇ ಸಿದ್ಧಪಡಿಸಿಕೊಂಡರು. ಅವರ ಬಗ್ಗೆ ಆಸಕ್ತಿಯುಳ್ಳವರು, ರಾಶಿಯವರನ್ನು ಗುರುತಿಸುವುದು,  ಒಂದು ಹಾಸ್ಯಕೃಷಿ, ಮತ್ತು ಸತ್ಯಾನ್ವೇಷಣೆ. ಅವರ ಬದುಕು ಬರಹಗಳಮೇಲೆ ಅನೇಕ ಚೇತನಗಳ ಪ್ರಭಾವವಿದೆ. ಅವರಲ್ಲಿ,  ವೀ.ಸೀ,  ಡಿ.ವಿ.ಜಿ, ಕೆ. ವಿ. ಅಯ್ಯರ್,  ಡಾ ಮೇಕ್ರಿ, ಶ್ರೀರಂಗ,   ಹೀಗೆ ಅವರೆಲ್ಲರದು ಒಂದು ತೂಕವಾದರೆ, ಕೈಲಾಸಂರವರದು ಮತ್ತೊಂದು ತೂಕವಾಗಿತ್ತು. ಇವರಿಬ್ಬರ ಮಧ್ಯೆ ಹೆಚ್ಚಿನ ವಯಸ್ಸಿನ ಅಂತರವಿತ್ತು. (೨೦ ವರ್ಷ ಹಿರಿಯರು) ಕೈಲಾಸಂ ಅವರನ್ನು  ’ಮಗೂ’ ಎಂದು ಕರೆಯುತ್ತಿದ್ದರು. ಶಿವರಾಂ ರವರಿಗೆ ಕೈಲಾಸಂ ಯಾವಾಗಲೂ  ’ಸರ್’ ಆಗಿದ್ದರು. ’ಕೊರವಂಜಿ’ ’ಯ ಮೊದಲ ಸಂಚಿಗೆ ಹೊರಬಂದದ್ದು, ಮಾರ್ಚ್, ೧೮, ೧೯೪೨ ರಲ್ಲಿ ಸಂಪಾದಕ ರಾಶಿ, ಸಲಹೆ ಪ್ರೋತ್ಸಾಹ ನಾ. ಕಸ್ತೂರಿ, ಪ್ರಕಾಶನ, ಬಿ.ಎನ್.ಗುಪ್ತ, ಆರ್.ಕೆ. ಲಕ್ಷ್ಮಣ್ ವ್ಯಂಗ್ಯಚಿತ್ರ ಪೂರೈಕೆಮಾಡುತ್ತಿದ್ದರು. ನಿಧಾನವಾಗಿ ಬರೆಯಲು ಒಪ್ಪಿಕೊಂಡು ಸಹಕರಿಸಿದವರಲ್ಲಿ, ಟೀ.ಸುನಂದಮ್ಮ, ಬಿ.ಆರ್. ನಾರಾಯಣ ಅಯ್ಯಂಗಾರ್, (ಬೀರಣ್ಣ) ದಾಶರಥೀ ದೀಕ್ಷಿತ್, ಡಾ. ಕೇಶವಮೂರ್ತಿ, (ಕೇಫ)ಆರಾಸೆ, ಟಿ.ಎಸ್.ರಾಮಚಂದ್ರರಾಯರ ಲೇಖನಗಳು ಕೊರವಂಜಿಯಲ್ಲಿ, ಖ್ಯಾತನಾಮರಾದ, ಶಿವರಾಮಕಾರಂತ, ಶ್ರೀರಂಗ, ಜಿ.ಪಿ.ರಾಜರತ್ನಂ, ಹೀಗೆ ಸಾಹಿತ್ಯ ಸಿರಿಯ ’ಹಸಿರುಹೊನ್ನು’ ತನ್ನ ಹೆಜ್ಜೆಗಳನ್ನು ಮುಂದಿಟ್ಟುಕೊಂಡು ದಾಪುಗಾಲು ಹಾಕಲಾರಂಭಿಸಿತು. ಮಾರ್ಚ್, ೧೯೬೭ ರಲ್ಲಿ ಅಂತ್ಯ. ’ಕನ್ನಡ ಸಾಹಿತ್ಯ ಪರಿಷತ್’ಗೆ ಉಳಿದ ಹಣದ ಬಾಬ್ತನ್ನು ಕೊಡುಗೆಯಾಗಿ ನೀಡಿ ಕೈಮುಗಿದರು. ಡಾ ಶಿವರಾಂ ಬಳಗದ ದತ್ತಿನಿಧಿ’ಸ್ಥಾಪಿಸಿ, ಹಾಸ್ಯ ಪ್ರಕಟನೆಗೆ ಮುಡುಪಾಗಿಟ್ಟರು. ’ಗ್ರೇಟ್ ಡೇನ್’ ನಾಯಿಯೊಂದನ್ನು ಸಾಕಿದರು.ರಾಶಿಯವರು ರಚಿಸಿದ ಪುಸ್ತಕ,  ’ಮನಮಂಥನ’ ಸಾಹಿತ್ಯದಲ್ಲಿ ಒಂದು ಅನನ್ಯ ಕೃತಿಯಾಗಿತ್ತು. ರಾಶಿಯವರಿಗೆ ಅವರ ಇಳಿವಯಸ್ಸಿನಲ್ಲಿ ಕಣ್ಣುಕಾಣಿಸುತ್ತಿರಲಿಲ್ಲ. ಕಿವಿಕೇಳಿಸುತ್ತಿರಲಿಲ್ಲ, ಬಿಕ್ಕಳಿಕೆ ಸದಾ ಕಾಡುತ್ತಿತ್ತು.


ವಿವಾಹ :

ಹೊಳೆನರಸಿಪುರದ ಬೆಳವಾಡಿಯ ಸೂರ್ಯನಾರಾಯಣರಾಯರು ಮಗಳು ’ನಾಗಮ್ಮ’ನವರ ಜೊತೆ ಮದುವೆಯಾಯಿತು. ೧೦೨೫ ರ ಜೂನ್ ತಿಂಗಳಲ್ಲಿ. ೧೯೨೮ ರಲ್ಲಿ ವೈದ್ಯಕೀಯ ಶಿಕ್ಷಣದ ೩ ನೆಯ ವರ್ಷ. ತಾಯಿಯವರ ವಿಯೋಗವಾಗಿ ಧೃತಿಗೆಟ್ಟರು. ತಂದೆ ’ಕಟ್ಟಾ ಸಂಪ್ರದಯಾಸ್ತರು’. ದೇವರ ಪೂಜೆ, ವ್ರತ, ದಿನವೆಲ್ಲಾ ಕಳೆಯುತ್ತಿದ್ದರು. ಅಂತರ್ಮುಖಿಗಳಾದ ಅವರು, ಸದಾ ದೇವರಧ್ಯಾನದಲ್ಲೇ ತಲ್ಲೀನರಾದರು. ಸನ್ಯಾಸ ಸ್ವೀಕರಿಸಿ ನಂಜನಗೂಡಿಗೆ ತೆರಳಿದರು. ೧೨ ವರ್ಷ ಹೀಗೆಯೇ ಇದ್ದ ಅವರು, ಶಿವರಾತ್ರಿಹಬ್ಬದ ವೇಳೆಯಲ್ಲಿ ’ಶ್ರೀಶೈಲ ಕ್ಷೇತ್ರ’ಕ್ಕೆ ತೀರ್ಥಯಾತ್ರೆ ಹೋದಾಗ, ’ನಂದ್ಯಾಲ್’ ಎಂಬಗ್ರಾಮದಲ್ಲಿ ’ಕಾಲರಾ ವ್ಯಾಧಿ’ಗೆ ತುತ್ತಾಗಿ, ನಿಧನರಾದರು.

ತಂದೆಯವರ ’ದೇವತಾರ್ಚನೆ’ ಮತ್ತು ’ತಲೆಚಿಟ್ಟುಹಿಡಿಸುವಂತ ವಿಧಾನಗಳು’ :

ತಂದೆ, ರಾಮಸ್ವಾಮಯ್ಯನವರು, ಮದ್ರಾಸ್ ವಿಶ್ವದ್ಯಾಲಯದಿಂದ ಬಿ. ಎ. ಪದವಿಪಡೆದಿದ್ದರು. ಸರಕಾರಿ ಸೆಕ್ರೆಟೇರಿಯೆಟ್ ಆಫೀಸ್ ನಲ್ಲಿ ’ಸೂಪರಿಂಟೆಂಡೆಂಟ್’ ನೌಕರಿ. ಅವರ ಪದವಿಗೆ ತಕ್ಕ ವರಮಾನ ಚೆನ್ನಾಗಿಯೇ ಸಿಕ್ಕುತ್ತಿತ್ತು. ಆದರೆ,  ಅಸಹಜ ಸ್ವರೂಪದ ದೇವತಾ ಭಕ್ತಿ. ದೇವರು ಧರ್ಮ, ಪೂಜೆ, ಪುನಸ್ಕಾರ, ಮಠ ಸ್ವಾಮಿಗಳು, ಹೀಗೆ ಸದಾ ನಿರತರಾದ ಅವರಿಗೆ ಬಂದ ವರಮಾನದಲ್ಲಿ ಅತಿಹೆಚ್ಚು ಪಾಲು ಖರ್ಚಾಗುತ್ತಿತ್ತು. ಪರಿವಾರದವರು, ಸದಾ ಹಣದ ತಾಪತ್ರಯದಲ್ಲಿ ಜೀವನ ನಿರ್ವಹಣೆ ಮಾಡಬೇಕಾಗಿತ್ತು. ೪ ಗಂಟೆಗೆ ಎದ್ದು ಸ್ನಾನ ಆಹ್ನಿಕಗಳನ್ನು ಮುಗಿಸಿ, ಅಗ್ನಿಕಾರ್ಯ, ಅಭಿಷೇಕ, ಪೂಜಾವಿಧಿಗಳು ಮಂತ್ರಪೂರ್ವಕವಾಗಿ ಸಾಂಗವಾಗಿ ನೆರೆವೇರಲು ಕನಿಷ್ಟಪಕ್ಷ ೫ ಗಂಟೆ ಆಗುತ್ತಿತ್ತು. ತಾಯಿಯವರು ಪಕ್ಕದಲ್ಲೇ ಇದ್ದು ಸಹಕರಿಸುತ್ತಿದ್ದರು. ೧೦ ಕ್ಕೆ ಎಲೆಹಾಕಬೇಕು. ೧೧ ರ ಒಳಗೆ, ಅವರು ಕಚೇರಿಯಲ್ಲಿರಬೇಕು. ಮತ್ತೆ ಕಚೇರಿಯಿಂದ ಮನೆಗೆ ಬಂದಕೂಡಲೇ ಯಥಾಪ್ರಕಾರವಾಗಿ ವಿದ್ಯುಕ್ತವಾಗಿ ಪೂಜೆ ರಾತ್ರಿ ೯ ಗಂಟೆಗೆ ಮುಗಿಯುತ್ತಿತ್ತು. ನಂತರ ಊಟ. ನ,

ರಾಶಿಯವರ ಜೀವನ-ವಿಧಿ ವಿಧಾನಗಳು :

ಚಿಕ್ಕವರಾಗಿದ್ದಾಗಿನಿಂದ ಪದವಿಯನಂತರವೂ ಹೆಚ್ಚುಕಡಿಮೆ ತಂದೆಯವರನ್ನು ಅನುಕರಣೆಮಾಡುತ್ತಿದ್ದರು. ನಂತರ ವೈದ್ಯಕೀಯ ಶಿಕ್ಷಣದ ಸಮಯದಲ್ಲಿ ಶವ-ವಿಚ್ಛೇದನದ ನಂತರ ಮನೆಗೆ ಬಂದು ಒಮ್ಮೊಮ್ಮೆ ಸ್ನಾನಮಾಡಲು ಪುರುಸೊತ್ತಿಲ್ಲದೆ ಅಡುಗೆ ಮನೆ ಪ್ರವೇಶಿಸಿದಾಗ, ಅವರಿಗೆ ಪಶ್ಚಾತ್ತಾಪವಾಗುತ್ತಿತ್ತು. ಮನೆಯ ಸಂಪ್ರದಾಯ, ಶಿಸ್ತುಮತ್ತು ಆಧುಕತೆಯ ವಿಚಾರ ಶಕ್ತಿಗಳ ಹೊಂದಾಣಿಕೆಯಲ್ಲಿ ಅವರು, ತೊಳಲಿ, ಬಳಲಿ ವ್ಯಥೆಪಟ್ಟಾಗ ಅವರಿಗೆ ಸಾಂತ್ವನದ ಮಾತಾಡಿ ಸಮಾಧಾನಮಾಡಿದವರು, ಕೈಲಾಸಂ ರವರು. ಅಯ್ಯರ್ ಬ್ರಾಹ್ಮಣರಾಗಿದ್ದ ಅವರು ವಿದೇಶದಿಂದ ಡಿಗ್ರಿ ಪಡೆದುಬಂದು, ’ಜಸ್ಟಿಸ್ ಪರಮಶಿವಯ್ಯರ್’ ರವರ ಶ್ರೀಮಂತ ಮಗ, ಕೈಲಾಸಂ ಅಯ್ಯರ್ ಸ್ನೇಹಮಾಡಲು ಮೊದಲು ಹಿಂಜರಿದರು. ತಾಯಿತೀರಿದ ಮೇಲೂ ೨ ವರ್ಷ ವಿಧ್ಯಾಭ್ಯಾದ ಅವಧಿಯಿತ್ತು. ಆರ್ಥಿಕಸ್ಥಿತಿ ಚಿಂತಾಜನಕವಾಗಿತ್ತು. ’ಭವನಾನಿ’ ಎಂಬ ಸಿನಿಮಾ ಯವರ ’ಮೃಚ್ಛಕಟಿಕ’ ಚಲನ ಚಿತ್ರದಲ್ಲಿ ಪಾತ್ರ ದೊರೆತಿತ್ತು. ೭೬ ರೂಗಳ ವೇತನ. ಆದರೆ ಕೈ ಅದಕ್ಕೆ ಅನುಮೋದನೆಕೊಡದೆ ನಿಲ್ಲಿಸಿದರು. ನಟನೆ ಅವರಿಗೆ ಕೊಡುತ್ತಿತ್ತೋ ಇಲ್ಲವೋ ಆದರೆ ವೈದ್ಯರಾಗಿ ಸಾಧಿಸಿದ್ದು ಅಪಾರ. ಕ್ವಾರ್ಟರ್ಸ್ ನಲ್ಲಿ ಉಳಿದು, ’ ಹೌಸ್ ಸರ್ಜನ್” ವೃತ್ತಿ ಮಾಡಿದರು.

ಡಾ. ಶಿವರಾಂ ರವರ ಪರಿವಾರ  :

ಮಕ್ಕಳು : ೬, (೩ ಗಂಡು ಮಕ್ಕಳು, ಮತ್ತು ೩ ಹೆಣ್ಣು ಮಕ್ಕಳು)

೧. ’ವಿಮಲಾ’

೨. ’ಕಮಲಾ ರಾಮಸ್ವಾಮಿ’

೩. ’ಲೀಲಮಿರ್ಲೆ’,

೪. ’ಡಾ. ಶಿವಕುಮಾರ್’ (ವೈದ್ಯ ಮತ್ತು ಬರಹಗಾರ, ಶಿವರಾಂ ಮರಣಿಸಿದ ಕೆಲವು ವರ್ಷಗಳ ಮೇಲೆ ಅವರು 'ಅಪರಂಜ ' ಎಂಬ ಹೆಸರಿನಲ್ಲಿ ನಗೆಪತ್ರಿಕೆಯನ್ನು ಹೊರತಂದು ಸಂಪಾದಕರಾಗಿದ್ದಾರೆ)

೫. ’ಡಾ. ಓಂಪ್ರಕಾಶ್’, (ಜನಪ್ರಿಯ ವೈದ್ಯ)

೬. ’ರಾಮಸ್ವಾಮಿ’,

ಒಟ್ಟು ೯ ಮಂದಿ ಮೊಮ್ಮಕ್ಕಳು.

ರಾಶಿಯವರು,  ಕೈಲಾಸಂರವರ ಮನೆಯಿಂದ ಊಟ ತರಿಸಿ ಕಾಲಹಾಕಿದರು. ಬಂಧು-ಬಳಗದವರನ್ನು ಸಹಾಯಕ್ಕೆ ಕೈಒಡ್ಡಲಿಲ್ಲ. ಕಾವ್ಯಕೃಷಿ ಮತ್ತು ತಂದೆಯವರ ವಿಚಾರಧಾರೆಗೆ ಭಿನ್ನವಾಗಿ ಆಧುನಿಕತೆ, ಪ್ರಾಚೀನತೆಗಳನ್ನು ಸಮನ್ವಯಿಸಿ ಅಂಧಾನುಕರಣೆಯ ಭಾಗಕ್ಕೆ ತಿಲಾಂಜಲಿಕೊಟ್ಟು, ವೈಜ್ಞಾನಿಕ ಮನೋಭಾವದ ಬೆಳಕಿನಲ್ಲಿ, ತರ್ಕಮಾಡಿ, ಪ್ರೇಮ, ಕಾಮ, ಮನಸ್ಸು, ಮೆದುಳು, ಆನಂದ, ದುಖಃ, ದೇವರು, ದೆವ್ವ ಮುಂತಾದವುಗಳ ವಿಶ್ಲೇಷಣೆ.

'ಮನಮಂಥನ,' ಕೃತಿ ಒಂದು ಅಪರೂಪದ ಪುಸ್ತಕವಾಗಿತ್ತು :

ಡಿ, ವಿ ಜಿಯವರಿಗೆ 'ಮನಮಂಥನ ' ಹಿಡಿಸಿತು. ವಿಷಯ, ಶೈಲಿ, ಉದಾಹರಿಸುವ ಕಥೆಗಳು, ಮನನ ಯೋಗ್ಯ ಸಾಲುಗಳು, ಕನ್ನಡಸಾಹಿತ್ಯದಲ್ಲೇ ಭಾರತೀಯ ಸಾಹಿತ್ಯದಲ್ಲೇ ಒಂದು ಅಪರೂಪದ ಕೃತಿ. ವೈಚಾರಿಕ ವಿಷಯಗಳು, ಮನಸ್ಸು ಮತ್ತು ಅದರ ಸ್ವರೂಪ,ಹುಟ್ಟು ಬೆಳನಣಿಗೆ, ಕೆಲಸಮಾಡುವ ಕ್ರಮ, ಮನಸ್ಸು ಮತ್ತು ದೇಹಗಳ ನಡುವಿನ ಸಂಬಂಧ, ಈ ಸಂಬಂಧದಲ್ಲಿ ಸಾಮರಸ್ಯ ತಪ್ಪಿದಾಗ, ತಲೆದೋರುವ ಅನೇಕಾನೇಕ ರೋಗಗಳು, ಜೀವನದ ಬಹು ಸಮಯವನ್ನು ಅವುಗಳ ಸಮಾಧಾನ ಹುಡುಕುವುದಕ್ಕಾಗಿಯೇ ಮುಡುಪಾಗಿಟ್ಟಿದ್ದರು.

ಬೆಂಗಳೂರಿನ ವೈದ್ಯಕೀಯ ಮಹಾ ವಿದ್ಯಾಲಯದ ಹುಟ್ಟು ಬೆಳವಣಿಗೆಗೆ ಕಾರಣರಾದವರಲ್ಲಿ ಪ್ರಮುಖರು, ರಾಶಿಯವರು. ಮನಗಂಡು ಆಗ ಆರೋಗ್ಯ ಮಂತ್ರಿಯಾಗಿದ್ದ ರಾಜಕುಮಾರಿ ’ಅಮೃತ್ ಕೌರ್’ ರವರನ್ನು ಭೆಟ್ಟಿಮಾಡಿ ತಮ್ಮ ಯೋಜನೆಯನ್ನು ಅವರ ಮುಂದಿಟ್ಟರು. ಆಗಿನ ಮುಖ್ಯಂತ್ರಿಗಳು, ’ಶ್ರೀ ಕೆಂಗಲ್ ಹನುಮಂತಯ್ಯನವರು’, ಇಬ್ಬರೂ ಜೊತೆಸೇರಿ ೧೯೫೪ ರಲ್ಲಿ ’ಮೈಸೂರ್ ಎಜುಕೇಶನ್ ಸೊಸೈಟಿ’ಯನ್ನು ಸ್ಥಾಪಿಸಿದರು. ಅದಕ್ಕೆ ಸದಸ್ಯರಾದವರು, ಟಿ ಶೇಶಾಚಲಂ, (ಬೆಂಗಳೂರಿನ ವೈದ್ಯ) ಸಿಂಗಾರ ವೇಲು ಮೊದಲಿಯಾರ್, ಶಫಿ ಮೇಕ್ರಿ, ಬಿ.ವಿ. ರಾಮಸ್ವಾಮಿ, ಸಿರ್ಸಿ, ಪ್ರೊ.ಎಮ್. ಎಸ್. ಥ್ಯಾಕರ್ (ಬೆಂಗಳೂರಿನ ಟಾಟ ಇನ್ಸ್ ಟಿ ಟ್ಯೂಟ್ ನ ಪ್ರಾಧ್ಯಾಪಕ) ಶ್ರೀ ಗಣೇಶ್ ರಾವ್ (ವಕೀಲರು)ಡಾ. ಬಿ. ಕೆ. ನಾರಾಯಣರಾವ್, ಅಧ್ಯಕ್ಷರು, ಶಿವರಾಂ ಗೌ. ಕಾರ್ಯದರ್ಶಿಗಳು. ೧೯೫೫, ನ ಜೂನ್ ತಿಂಗಳಲ್ಲಿ,  ರಲ್ಲಿ ’ಬೆಂಗಳೂರ್ ಮೆಡಿಕಲ್ ಕಾಲೇಜ್’ ಉದಯಿಸಿತು. ಉಪಾಧ್ಯಕ್ಷರು. ೩ ವರ್ಷಗಳ ಬಳಿಕ ಅಂದಿನ ಮುಖ್ಯಮಂತ್ರಿ, ಶ್ರೀ ನಿಜಲಿಂಗಪ್ಪನವರ ಆದೇಶದಂತೆ, ಸರ್ಕಾರದ ಹವಾಲೆಗೆ ಕೊಡಲಾಯಿತು.

’ಬೆಂಗಳೂರಿನ ವಾಣೀವಿಲಾಸ ಆಸ್ಪತ್ರೆಯ ಉಗಮಕ್ಕೂ ಶಿವರಾಂ-ಕೈಲಾಸಂರವರ ಕೊಡುಗೆ ಅನನ್ಯ :

’ಬೆಂಗಳೂರಿನ ವಾಣೀವಿಲಾಸ ಆಸ್ಪತ್ರೆ’ಯ ಅಧಿಕಾರಿ, ಡಾ. ಮಿಸ್. ಆಲ್ಬುಕರ್ಕ್’ ರಾಶಿಯವರ ಗುರುಗಳಾಗಿದ್ದರು. ಅವರು ’ವಾಣೀವಿಲಾಸ ಆಸ್ಪತ್ರೆಯಲ್ಲಿ  ಪ್ರಸೂತಿ ತಂತ್ರ ಮತ್ತು ’ಸ್ತ್ರೀ-ರೋಗ ವಿಭಾಗ ’ದಲ್ಲಿ ತಜ್ಞೆಯಾಗಿದ್ದರು. ಆಗ ಹೆರಿಗೆ ಆಸ್ಪತ್ರೆ ಇಂದಿನ ’ಇನ್ ಸ್ಪೆ ಕ್ಟರ್ ಜನರಲ್ ಆಫ್ ಪೊಲಿಸ್’ ಕಟ್ಟಡದಲ್ಲಿತ್ತು.ಮೊದಲಿನಿಂದಲೂ  ಆಕೆಗೆ ಒಂದು ಸುಸಜ್ಜಿತೆ ಹೆರಿಗೆ ಆಸ್ಪತ್ರೆಯನ್ನು ಕಟ್ಟುವ ಹಂಬಲವಿತ್ತು. ಹಣ ಸಂಗ್ರಹಿಸಲು’ ಬೆನಿಫಿಟ್ ಶೋ’ಗಳನ್ನು ನಡೆಸಲು ತೀರ್ಮಾನಿಸಿ, ರಾಶಿಯವರ ಆಪ್ತ ಗೆಳೆಯ ”ಕೈ’ ರವರಿಗೆ ಅವರ ಸುಪ್ರಸಿದ್ಧ ನಾಟಕಗಳನ್ನಾಡಿಸುವ ಮೂಲಕ ಹಣ ಸಂಗ್ರಹಿಸಲು  ಸಾಧ್ಯವೇ,  ವಿಚಾರಿಸಿ ಎಂದರು. ಹಾಗೆ ಕೈ ಮತ್ತು ರಾಶಿಯವರ ಪ್ರಯತ್ನದಿಂದ ಸಂಗ್ರಹವಾದ ಹಣ ೩೫,೦೦೦ ರೂಪಾಯಿಗಳು. ಮಿಸ್ ಆಲ್ಬುಕರ್ಕ್ ರವರು ಎಣಿಸಿದ್ದಕ್ಕಿಂತಾ ಅತಿ ಹೆಚ್ಚು ಹಣ ಸಿಕ್ಕಿತು. ಈ ಹಣದಿಂದ  ’ಶಿಲಾನ್ಯಾಸ’ ವನ್ನು ಹಾಕಲಾಯಿತು.

 ರಾಶಿ ಮನೋವೈದ್ಯರಲ್ಲದಿದ್ದರೂ ಅವರು ಹೊರತಂದ ಹಲವು ಗ್ರಂಥಗಳು ಅಪರೂಪದ ಇದಕ್ಕೆ ನೆರವಾದವರು, ಡಾ. ಸೂರ್ಯ (’ನಿಮ್ ಹ್ಯಾನ್ಸ್’ ನ ಮನೋವೈದ್ಯ ವಿಭಾಗದ ಮುಖ್ಯಸ್ಥ) ಮತ್ತು ಡಾ. ಗೋಪಾಲಸ್ವಾಮಿಗಳು. (ಭಾರತದ ಮೊಟ್ಟಮೊದಲ ’ಬಾನುಲಿಕೇಂದ್ರ’ ಸ್ಥಾಪಕರು) ’ಮನಮಂಥನ’, ’ಮನೋನಂದನ’, ’ಮೃಗಶಿರ’, ’ಭಯ’, ’ಸರಳ ವಿಶ್ಲೇಷಣೆ’, ಮುಂತಾದ ಕನ್ನಡ ಕೃತಿಗಳು ಕನ್ನಡದ ಜನತೆಗೆ ಲಭ್ಯವಾಯಿತು.

’ತೋಳಗಳ ಬದುಕು-ಸನಾತನ ಭಾರತೀಯ ಜೀವನ ಪದ್ಧತಿ’ ಅವರ ಮೇಲೆ ಗಾಢವಾದ ಪರಿಣಾಮವನ್ನು ಬೀರಿತ್ತು. ೧೯೫೮ ರಲ್ಲೇ ’ಮನಪ್ರಸ್ಥ’ದ ಬದುಕನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು,  ೧೦೭೬ ರಲ್ಲಿ ಪೂರ್ಣವಾಗಿ ತಮ್ಮ ವೈದ್ಯಕೀಯ ವೃತ್ತಿಗೆ ಶರಣುಹೊಡೆದರು. ಹಾಸ್ಯವಿಧಾನದಿಂದ ತಮ್ಮ ಜೀವನದಲ್ಲಾಗಿದ್ದ ಕಷ್ತ-ಕೋಟಲೆಗಳಿಗೆ ಸಮಾಧಾನಕಂಡುಕೊಂಡ ಅವರು, ಸಮಾಜದಲ್ಲಿನ ಅನೇಕ ವಿರೋಧಾಭಾಸಗಳನ್ನು ತಮ್ಮ ಅಣಕು-ವ್ಯಂಗೋಕ್ತಿಗಳಿಂದ ಯಾರಮನಸ್ಸನ್ನೂ ನೋಯಿಸದೆ ’ಕೊರವಂಜಿ’ಪತ್ರಿಕೆಯಲ್ಲಿ ದಾಖಲಿಸುತ್ತಿದ್ದರು  ಟಿ. ಟಿ. ಪಿ. ಕೈಲಾಸಂ ( ೧೮೮೫-೧೯೪ಮರಣ ಅವರ ಮೇಲೆ ಗಾಢವಾದ ಪರಿಣಾಮಬೀರಿತು. ಒಬ್ಬ ಆಪ್ತ ಗೆಳೆಯ, ಬಂಧು ಮತ್ತು ಗುರುವನ್ನು ಕಳೆದುಕೊಂಡಾ ದುಖಃ ಅವರಿಗೆ ಗೋಚರಿಸಿತು. ತಾವೂ ಸಾವಿನ ನಿಗೂಢತೆಯ ಬಗ್ಗೆ ಗಾಢವಾಗಿ ಚಿಂತಿಸಿ, 'Death and Nachiketas'  ಎಂಬ ಪುಸ್ತಕವನ್ನು ಬರೆದರ ’.Ananda and Experience,’   ಮತ್ತೊಂದು ಪುಸ್ತಕ

ರಾಶಿಯವರ ದೈನಂದಿನ  ಜೀವನ ಕ್ರಮ :

ಬೆಳಿಗ್ಯೆ ಬೇಗ ಎದ್ದು ಸ್ನಾನಮಾಡಿಗಳನ್ನು ಮುಗಿಸಿ, ಆಸ್ಪತೆಯ ರೋಗಿಗಳನ್ನು ಭೆಟ್ಟಿಯಾಗುತ್ತಿದ್ದರು. ಅವರಲ್ಲಿ ಒಬ್ಬರನ್ನೂ ಸರಿಯಾಗಿ ಪರೀಕ್ಷಿಸಿ, ಔಷಧದ ಚೀಟಿಗಳನ್ನು ಕೊಟ್ಟು ಮನೆಯೊಳಗೆ ಪ್ರವೇಶಿಸುವ ಹೊತ್ತಿಗೆ ಪಡಸಾಲೆಯಲ್ಲಿ ಗೆಳೆಯರು ಅವರಿಗಾಗಿ ಕಾಯುತ್ತಾ ಕುಳಿತುರುತ್ತಿದ್ದರು. ಅವರೊಂದಿ ಹರಟೆಹೊಡೆಯುತ್ತಾ ಬೆಳಗಿನ ಉಪಹಾರಸೇವನೆಮಾಡುವಹೊತ್ತಿಗೆ, ೯ ಗಂಟೆ. ೯ ಕ್ಕೆ ಸರಿಯಾಗಿ ಅಂಗಡಿ(ಕ್ಲಿನಿಕ್ ಗೆ) ಮತ್ತೆ ಹೋಗುತ್ತಿದ್ದರು. ಮನೆಯಲ್ಲಿ ಊಟಕ್ಕೆ ಮದ್ಯಾಹ ತಪ್ಪದೆ ಬರುತ್ತಿದ್ದರು. ’ಸೆಂಚ್ಯುರಿ ಟೆನ್ನಿಸ್ ಕ್ಲಬ್’ ನಲ್ಲಿ ಆಡಲು ಹೋಗುತ್ತಿದ್ದರು. ರಾತ್ರಿಮನೆಗೆ ಬಂದು ಊಟ. ಆಮೇಲೆ ೧೧ ರವರೆಗೆ ಅಧ್ಯಯನ-ಬರಹಗಳು, ಇತ್ಯಾದಿ ಕ್ರಮವಾಗಿ ಪ್ರತಿದಿನ ನಡೆಯುತ್ತದ್ದವು. ಆಪ್ತಮಿತ್ರರು, ಎಂ. ಎನ್. ಪಾರ್ಥಸಾರಥಿ, ಡಾ. ಡಿ. ಎಸ್. ಲಕ್ಷ್ಮಣರಾವ್, ಡಾ. ಬಿ. ಆರ್. ನಾರಾಯಣ ಅಯ್ಯಂಗಾರ್, ಪೂರ್ಣೇಂದು ಮೋಹನ್ ಲಾಹಿರಿ, ಜಾರ್ಜ್ ಚಾಂಡಿ, ಸಾಂಬಮೂರ್ತಿ, ರವಿಕಿರ್ಲೋಕರ್,

ಆಧುನಿಕ ಕನ್ನಡಸಾಹಿತ್ಯದಲ್ಲಿ ಮೊಟ್ಟಮೊದಲ ಹಾಸ್ಯ ಸಾಹಿತ್ಯ, ಆರ್. ನರಸಿಂಹಾಚಾರ್ಯರ ’ನಗೆಗಡಲು’, ಎಂಬ ಪುಸ್ತಕ ಇದರಲ್ಲಿ ಗಾಂಪರೊಡೆಯರು ಮತ್ತು ಅವರ ೫ ಜನ ದಡ್ಡ ಶಿಷ್ಯಂದಿರ ಕಥೆಯೇ ಮೂಲಧಾತು. ಇದನ್ನು ಬಲ್ಲವರು, ಒರಟುಹಾಸ್ಯವೆಂದು ಪರಿಗಣಿಸಿದರು. ತಿಳಿಹಾಸ್ಯಕ್ಕೆ ಬುನಿಯಾದಿಹಾಕಿದವರು, ರಾಶಿಯವರು. ಕೊರವಂಜಿ ಪತ್ರಿಕೆಯ ಮೂಲಕ ಕನ್ನಡದ ಹಲವಾರು ಪ್ರಬುದ್ಧಮಾನಕ್ಕೆ ಬರುತ್ತಿದ್ದ ಲೇಖಕರಿಗೆ ಪ್ರೋತ್ಸಾಹ ಕೊಟ್ಟು ಅವರ ಕೈಲಿ ಬರೆಸಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಕೈಲಾಸಂ ರವರ ಪ್ರೇರಣೆ ಇಲ್ಲದಿದ್ದರೆ ಅವರು ಒಬ್ಬ ನಟನಾಗುತ್ತಿದ್ದರೋ ಏನೋ. ಆದರೆ ವೈದ್ಯಕೀಯ ಶಿಕ್ಷಣ ಪಡೆದು ವೈದ್ಯರಾಗಿ,  ಸಾಹಿತಿಯಾಗಿ ಕನ್ನಡ ಭಾಷೆಗೆ ಅನುಪಮ ಸೇವೆಸಲ್ಲಿಸಿದ್ದಾರೆ.

’ರಾಶಿ’ ಯವರು ತಮ್ಮ ನಿವೃತ್ತಿಯ ನಂತರ ಬಾಳಿನೊಡನೆ ಮಾಡಿದ ಹೊಂದಾಣಿಕೆ  :

ಮನೆಯ ಹೊರಗೆ  ’ದೊಡ್ಡ ಗ್ರಂಥಾಯ’ ಕ್ಕೇ ಹೊಂದಿಕೊಂಡಂತೆ ಒಂದು ಮನೆ ನಿರ್ಮಿಸಿ, ಅಲ್ಲಿಯೇ  ತಮ್ಮ ಕೊನೆಯ ದಿನಗಳನ್ನು ಕಳೆದರು.


ರಾಶಿಯವರು ಬರೆದ ಒಟ್ಟು ಕಾದಂಬರಿಗಳ ಸಂಖ್ಯೆಯೆ, ೪೦


* ೧೩  ಹಾಸ್ಯ ಕೃತಿಗಳು

* ೩  ದೈಹಿಕ ಆರೋಗ್ಯ ಸಂಬಂಧಿತ

* ೩,  ವ್ಯಕ್ತಿ ಚಿತ್ರಗಳು

* ೫  ವೈಚಾರಿಕ ಸಾಹಿತ್ಯ

* ೮  ಕಾದಂಬರಿ ಕಥಾ ಸಂಕಲನ,

* ೪  ಅಧ್ಯಾತ್ಮ ವಿಚಾರ ಸಂಬಂಧಿತ ಕೃತಿಗಳು

* ೫  ಕೃತಿಗಳು ಇಂಗ್ಲೀಷ್ ನಲ್ಲಿವೆ.


ಪ್ರಶಸ್ತಿ ಪುರಸ್ಕಾರಗಳು :

*  ೧೯೭೪  ’ರಾಜ್ಯ ಸಾಹಿತ್ಯ ಅಕೇಡಮಿ ಪ್ರಶಸ್ತಿ ’

*  ೧೯೭೬ ”ಕೇಂದ್ರ ಅಕೆಡಮಿ ಪ್ರಶಸ್ತಿ”


Comments

Post a Comment

Popular posts from this blog

ಶ್ರೀ. ಟಿ. ಪಿ. ಕೈಲಾಸಂ ನಾಟಕೋತ್ಸವ, ಮುಂಬೈನ " ಮೈಸೂರ್ ಅಸೋಸಿಯೇಷನ್" ನಲ್ಲಿ !

”ಟಿ. ಪಿ. ಕೈಲಾಸಂ ನಾಟಕೋತ್ಸವ ’- ’ಕೈಲಾಸಂ ನಾಟಕಗಳ ಸರಮಾಲೆ’-ಒಂದು ಸುಂದರ ಪ್ರಯೋಗ ! !